ವಿಷಯಕ್ಕೆ ಹೋಗು

ಧೋಲಾವೀರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧೋಲಾವೀರಾದ ಮೆಟ್ಟಿಲುಗಳಿರುವ ಜಲಾಶಯಗಳಲ್ಲಿ ಒಂದು

ಇತ್ತೀಚೆಗೆ ಇದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ೪೦ನೇ ತಾನವಾಗಿದೆ

ಧೋಲಾವೀರಾ ಗುಜರಾತ್‍ನ ಕಚ್ ಜಿಲ್ಲೆಯ ಭಚವು ತಾಲೂಕಿನಲ್ಲಿನ ಒಂದು ಪುರಾತತ್ವ ತಾಣ. ಈ ತಾಣವು ಪ್ರಾಚೀನ ಸಿಂಧೂತಟದ ನಾಗರೀಕತೆಯ ಒಂದು ನಗರದ ಅವಶೇಷಗಳನ್ನು ಹೊಂದಿದೆ. ಇದು ಐದು ಅತಿ ದೊಡ್ಡ ಹರಪ್ಪಾ ತಾಣಗಳಲ್ಲಿ ಒಂದು ಮತ್ತು ಸಿಂಧೂತಟದ ನಾಗರೀಕತೆಗೆ ಸೇರಿದ ಭಾರತದಲ್ಲಿನ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದು. ಇದು ತನ್ನ ಕಾಲದ ನಗರಗಳಲ್ಲಿ ಅತ್ಯಂತ ಭವ್ಯವೆಂದೂ ಪರಿಗಣಿತವಾಗಿದೆ.[] ಈ ತಾಣದಲ್ಲಿ ಕ್ರಿ.ಪೂ. ೨೬೫೦ ರಿಂದ ಜನರು ನೆಲೆಸಲು ಆರಂಭಿಸಿದ್ದರು, ಮತ್ತು ಸುಮಾರು ಕ್ರಿ.ಪೂ. ೨೧೦೦ರ ನಂತರ ಈ ತಾಣ ನಿಧಾನವಾಗಿ ಕ್ಷೀಣಿಸಿತು.[]

ಈ ತಾಣವನ್ನು ೧೯೬೭-೧೯೬೮ರಲ್ಲಿ ಭಾರತದ ಪುರಾತತ್ವ ಸರ್ವೇಕ್ಷಣೆಯ (ಎ.ಎಸ್.ಐ) ಜೆ. ಪಿ. ಜೋಷಿ ಶೋಧಿಸಿದರು ಮತ್ತು ಇದು ಎಂಟು ಪ್ರಮುಖ ಹರಪ್ಪಾ ತಾಣಗಳಲ್ಲಿ ಐದನೇ ಅತಿ ದೊಡ್ಡ ತಾಣ. ಈ ತಾಣದ ಉತ್ಖನನ ೧೯೯೦ರಿಂದ ನಡೆದಿದೆ, ಮತ್ತು ಧೋಲಾವೀರಾ ಸಿಂಧೂತಟದ ನಾಗರೀಕತೆಯ ವ್ಯಕ್ತಿತ್ವಕ್ಕೆ ನಿಜಕ್ಕೂ ಹೊಸ ಆಯಾಮಗಳನ್ನು ಸೇರಿಸಿದೆ ಎಂದು ಎ.ಎಸ್.ಐ ಅಭಿಪ್ರಾಯ ಪಡುತ್ತದೆ. ಉತ್ಖನನವು ನಗರ ಯೋಜನೆ ಮತ್ತು ವಾಸ್ತುಶಿಲ್ಪವನ್ನು ಬೆಳಕಿಗೆ ತಂದಿತು, ಮತ್ತು ಮುದ್ರೆಗಳು, ಮಣಿಗಳು, ಪ್ರಾಣಿ ಮೂಳೆಗಳು, ಚಿನ್ನ, ಬೆಳ್ಳಿ, ಬೇಯುಮಣ್ಣಿನ ಆಭರಣಗಳು, ಕುಂಬಾರಿಕೆ ಹಾಗೂ ಕಂಚಿನ ಪಾತ್ರೆಗಳಂತಹ ದೊಡ್ಡ ಸಂಖ್ಯೆಯ ಪುರಾತನ ವಸ್ತುಗಳನ್ನು ಬೆಳಕಿಗೆ ತಂದಿತು. ಧೋಲಾವೀರಾ ದಕ್ಷಿಣ ಗುಜರಾತ್, ಸಿಂಧ್, ಪಂಜಾಬ್ ಮತ್ತು ಪಶ್ಚಿಮ ಏಷ್ಯಾದ ನೆಲೆಗಳ ನಡುವಿನ ಒಂದು ಪ್ರಮುಖ ವ್ಯಾಪಾರ ಕೆಂದ್ರವಾಗಿತ್ತು ಎಂದು ಪುರಾತತ್ವಶಾಸ್ತ್ರಜ್ಞರು ನಂಬುತ್ತಾರೆ.

ಬಂದರು ನಗರ ಲೋಥಲ್‍ಗಿಂತ ಹಳೆಯದೆಂದು ಅಂದಾಜಿಸಲಾದ ಧೋಲಾವೀರಾ ಆಯತಾಕಾರ ಮತ್ತು ವ್ಯವಸ್ಥೆಯನ್ನು ಹೊಂದಿದೆ, ಮತ್ತು ೨೨ ಹೆಕ್ಟೇರ್‍ನಷ್ಟು ಹರಡಿದೆ. ಹರಪ್ಪ ಮತ್ತು ಮೊಹೆಂಜೊ-ದಾರೋ ಗೆ ಭಿನ್ನವಾಗಿ, ಈ ನಗರವನ್ನು ಮೊದಲೇ ಅಸ್ತಿತ್ವದಲ್ಲಿದ್ದ ಮೂರು ವಿಭಾಗಗಳ ಜ್ಯಾಮಿತೀಯ ಯೋಜನೆಯಲ್ಲಿ ನಿರ್ಮಿಸಲಾಗಿತ್ತು – ದುರ್ಗ, ಮಧ್ಯ ಪಟ್ಟಣ, ಮತ್ತು ಕೆಳ ಪಟ್ಟಣ. ದುರ್ಗ ಮತ್ತು ಮಧ್ಯ ಪಟ್ಟಣಗಳು ತಮ್ಮದೇ ಸ್ವಂತ ರಕ್ಷಣಾ ಕೃತಿ, ಪ್ರವೇಶದ್ವಾರಗಳು, ನಿರ್ಮಿತ ಕ್ಷೇತ್ರಗಳು, ಬೀದಿ ವ್ಯವಸ್ಥೆ, ಬಾವಿಗಳು, ಮತ್ತು ದೊಡ್ಡ ತೆರೆದ ಸ್ಥಳಗಳೊಂದಿಗೆ ಸುಸಜ್ಜಿತವಾಗಿದ್ದವು. ದುರ್ಗವು ನಗರದಲ್ಲಿನ ಅತ್ಯಂತ ಸಂಪೂರ್ಣವಾಗಿ ಬಲಪಡಿಸಿದ ಮತ್ತು ಸಂಕೀರ್ಣ ಪ್ರದೇಶವಾಗಿತ್ತು. ಎತ್ತರದ ಕೋಟೆಯ ನಿಲ್ಲುಕಟ್ಟೆಗಳು ಇಮ್ಮಡಿ ಆಳುವೇರಿಗಳಿಂದ ರಕ್ಷಿತವಾಗಿವೆ. ಇದರ ಪಕ್ಕ ಪ್ರಮುಖ ಅಧಿಕಾರಿಗಳು ವಾಸಿಸುತ್ತಿದ್ದ ಒಳಾಂಗಣ ಸ್ಥಳವಿದೆ. ಸಾಮಾನ್ಯ ರಕ್ಷಣಾ ಗೋಡೆಗಳ ಒಳಗಿನ ನಗರ ೪೮ ಹೆಕ್ಟೇರ್‍ನಷ್ಟಿದೆ. ಗೋಡೆಗಳ ಹೊರಗೆ, ಮತ್ತೊಂದು ನೆಲಸುಸ್ಥಳವನ್ನು ಕಂಡುಹಿಡಿಯಲಾಗಿದೆ. ನಗರದ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಎಲ್ಲ ಕಟ್ಟಡಗಳು ಕಲ್ಲಿನಿಂದ ಕಟ್ಟಲ್ಪಟ್ಟಿವೆ, ಹರಪ್ಪ ಮತ್ತು ಮೊಹೆಂಜೊ-ದಾರೋವನ್ನು ಒಳಗೊಂಡಂತೆ, ಬಹುತೇಕ ಇತರ ಹರಪ್ಪನ್ ತಾಣಗಳಲ್ಲಿನ ಕಟ್ಟಡಗಳು ಕೇವಲ ಇಟ್ಟಿಗೆಯಿಂದ ಕಟ್ಟಲ್ಪಟ್ಟಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Kenoyer & Heuston, Jonathan Mark & Kimberley (2005). The Ancient South Asian World. New York: Oxford University Press. p. 55. ISBN 9780195222432.
  2. Possehl, Gregory L. The Indus Civilization: A Contemporary Perspective (in ಇಂಗ್ಲಿಷ್). Rowman Altamira. p. 17. ISBN 9780759101722. Retrieved 3 June 2016.


  翻译: